Untitled Document
Sign Up | Login    
Dynamic website and Portals
  

Related News

ಪ್ರಧಾನಿ ಮೋದಿ ಅವರ 36ನೇ ಮನ್ ಕಿ ಬಾತ್

ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ತಿಂಗಳ ಜನಪ್ರಿಯ ರೇಡಿಯೊ ಕಾರ್ಯಕ್ರಮಕ್ಕೆ ಇಂದು ಮೂರು ವರ್ಷ. ಈ ಹಿನ್ನಲೆಯಲ್ಲಿ 36ನೇ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಜನರೊಂದಿಗೆ ಬೆರೆತು ಅವರದೇ ಮಾತುಗಳನ್ನು ವ್ಯಕ್ತಪಡಿಸುವ ಈ...

ಕಾವೇರಿ ವಿವಾದ: ತುರ್ತು ಸಭೆ ಕರೆದ ಪ್ರಧಾನಿ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ಮಧ್ಯಪ್ರವೇಶಿಸಿದ್ದು, ನವದೆಹಲಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು...

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಅತ್ಯುತ್ತಮ ಸಹಭಾಗಿಗಳಾಗಬಲ್ಲವು: ಪ್ರಧಾನಿ ಮೋದಿ

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಜಗತ್ತಿನಲ್ಲಿ ಅತ್ಯುತ್ತಮ ಸಹಭಾಗಿಗಳಾಗಬಲ್ಲವು ಎಂದು ಹೇಳುವ ಮೂಲಕ ಭಾರತ ಹಾಗೂ ಜರ್ಮನಿ ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏ.14ರಂದು ಮೂರು ದಿನಗಳ ಜರ್ಮನ್ ಪ್ರವಾಸ ಮುಕ್ತಾಯಗೊಳಿಸಿರುವ...

ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿ: ನಾಗರಿಕ ಪರಮಾಣು ಒಪ್ಪಂದ, ವ್ಯಾಪಾರ ಮಹತ್ವದ ಅಜೆಂಡಾ

'ತ್ರಿರಾಷ್ಟ್ರಗಳ ಪ್ರವಾಸ' ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ತಡರಾತ್ರಿ ಫ್ರ್ಯಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಉನ್ನತ ನಿಯೋಗದೊಂದಿಗೆ ಆಗಮಿಸಿದ ನರೇಂದ್ರಮೋದಿ ಅವರನ್ನು ಫ್ರಾನ್ಸ್‌ ಸಚಿವರು ಹಾಗೂ ಅಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ಮೋದಿ...

ಹೊಸ ಮಾವಿನ ತಳಿಗೆ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮಾವು ಬೆಳೆಗಾರ

'ಮಾವಿನ ಸಸಿ'ಗಳನ್ನು ಕಸಿ ಮಾಡುವ ಮೂಲಕ ಹೊಸ ತಳಿಗಳನ್ನು ರೂಪಿಸುವುದರಲ್ಲಿ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಮಾವು ಬೆಳೆಗಾರ ತಾವು ಅಭಿವೃದ್ಧಿ ಪಡಿಸಿರುವ ಹೊಸ ತಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದಾರೆ. ಹಾಜಿ ಕಲೀಮುಲ್ಲಾ ಎಂಬುವವರು, ಕೋಲ್ಕತ್ತಾ ಹಾಗೂ ಉತ್ತರ...

ಶಿಕ್ಷಣ ವ್ಯವಸ್ಥೆ ಕೇವಲ ರೋಬೋಟ್ ಸೃಷ್ಠಿಗೆ ಮಾತ್ರ ಸೀಮಿತವಾಗಬಾರದು: ಮೋದಿ

'ಶಿಕ್ಷಣ ವ್ಯವಸ್ಥೆ' ವಿಶ್ವಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿ.25ರಂದು ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ವ್ಯವಸ್ಥೆ ಎಂಬುದು ರೋಬೋಟ್ ಗಳನ್ನು ಉತ್ಪಾದನೆ ಮಾಡಲು ಮಾತ್ರ ಸೀಮಿತವಾಗಬಾರದು, ರೋಬೋಟ್...

ಸಾರ್ಕ್ ಸಮ್ಮೇಳನ: ಪ್ರಧಾನಿ ಮೋದಿ-ಪಾಕ್ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ನ.26ರಿಂದ 28ರವರೆಗೆ ನೇಪಾಳದಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ರಸ್ತೆ ಮೂಲಕವೇ ನೇಪಾಳಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಸಾರ್ಕ್ ದೇಶಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸಹ ನೇಪಾಳಕ್ಕೆ ಭೇಟಿ...

ಅಭಿವೃದ್ಧಿಗೆ ಸಂಶೋಧನೆಯೇ ಮೂಲ:ಪ್ರಧಾನಿ ನರೆಂದ್ರ ಮೋದಿ

'ಆಸ್ಟ್ರೇಲಿಯಾ'ದ ಬ್ರಿಸ್ಬೇನ್ ನ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಗೆ ಸಂಶೋಧನೆಯೇ ತಾಯಿ ಎಂಬ ಸಂದೇಶ ನೀಡಿದ್ದಾರೆ. ಕೃಷಿ ರೋಬೋಟ್ ಮೇಲೆ ಸಂದೇಶ ಬರೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರೋಬೋಟ್ ಮೇಲೆ ಬರೆದಿರುವ ಪ್ರಧಾನಿ ಮೋದಿ...

ಭಾರತದಲ್ಲಿ ಬಂಡವಾಳ ಹೂಡಲು ಮಲೇಷಿಯಾ ಕಂಪನಿಗಳಿಗೆ ಮೋದಿ ಆಹ್ವಾನ

'ಏಸಿಯಾನ್-ಇಂಡಿಯಾ ಶೃಂಗಸಭೆ'ಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಮಲೇಷಿಯಾ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಶೃಂಗ ಸಭೆಯ ಸಂದರ್ಭದಲ್ಲಿ ಮಲೇಷಿಯಾದ ಪ್ರಧಾನಿ ನಜೀಬ್ ರಜಾಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ...

ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ: ಪ್ರಧಾನಿ ಮೋದಿ

ತಮ್ಮ ನೇತೃತ್ವದ ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿ(ಪೂರ್ವ ದೇಶಗಳೊಂದಿಗೆ ಸಕ್ರಿಯ ಸಂಬಂಧ) ಬಗ್ಗೆ ಗಮನ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಸೀಯಾನ್ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ....

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ:10 ರ್ಯಾಲಿಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ

ಅತ್ಯಂತ ಕುತೂಹಲ ಸೃಸ್ಟಿಸಿರುವ ಹಾಗೂ ಪ್ರತಿಷ್ಠೆಯ ಚುನಾವಣಾ ಕಣವಾಗಿರುವ ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ 10 ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ನ.10ರಂದು ಪ್ರಚಾರ ಕೈಗೊಳ್ಳಲಿರುವ ಪ್ರಧಾನಿ ಮೋದಿ ರಾಜ್ಯಾದ್ಯಂತ 10 ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ವೇಳಾಪಟ್ಟಿ ಸಿದ್ಧತೆ ಮಾಡಲಾಗುತ್ತಿದ್ದು ಅಂತಿಮ ಹಂತದಲ್ಲಿದೆ...

ಕಪ್ಪುಹಣ: ಮೋದಿ ಸರ್ಕಾರಕ್ಕೆ ಅಣ್ಣಾ ಎಚ್ಚರಿಕೆ

'ಕಪ್ಪುಹಣ' ವಾಪಸ್ ತರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಸುಳ್ಳಾದರೆ ದೇಶಾದ್ಯಂತ ಮತ್ತೆ ಚಳುವಳಿ ಪ್ರಾರಂಭ ಮಾಡುತ್ತೇನೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ. ಕಪ್ಪುಹಣ ಹೊಂದಿರುವವರ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್...

ಹುಡ್ ಹುಡ್ ಚಂಡಮಾರುತ: ಹಾನಿಗೊಳಗಾದ ಪ್ರದೇಶಗಳಿಗೆ ನಾಳೆ ಪ್ರಧಾನಿ ಭೇಟಿ

'ಹುಡ್ ಹುಡ್ ಚಂಡಮಾರುತ'ದಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಅ.14ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಹುಡ್ ಹುಡ್ ಪೀಡಿತ ಪ್ರದೇಶ ವಿಶಾಖಪಟ್ಟಣಂಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಚಂಡಮಾರುತದಿಂದ ಹಾನಿಯಾದ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ಮೂಲಕ ಮೋದಿ ಪರಿಶೀಲಿಸಲಿದ್ದಾರೆ....
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited